ಪ್ರಾರ್ಥನೆ

1
ಓಂ ತತ್‌ತ್‌ ಶ್ರೀ ನಾರಾಯಣ ನೀ | ಪುರುಷೋತ್ತಮ ಗುರು ನೀ
ಸಿದ್ಧ ಬುದ್ಧ ನೀ ಸ್ಕಂದ ವಿನಾಯಕ / ಸವಿತಾ ಪಾವಕ ನೀ
ಬ್ರಹ್ಮಮಜ್ಜ ನೀ ಯವ ಶಕ್ತಿ ನೀ | ಈಶು ಪಿತಾ ಪ್ರಭು ನೀ
ರುದ್ರ ವಿಷ್ಣು ನೀ ರಾಮಕೃಷ್ಣ ನೀ ! ರಹೀಮ ತಾಓ ನೀ
ವಾಸುದೇವ ಗೋ-ವಿಶ್ವರೂಪ ನೀ | ಚಿದಾನಂದ ಹರಿ ನೀ
ಅದ್ವಿತೀಯ ನೀ ಅಕಾಲ ನಿರ್ಭಯ | ಆತ್ಮಲಿಂಗ ಶಿವ ನೀ ॥
ಓಂ ತತ್ ಸತ್


2
ಈಶಾವಾಸ್ಯಮಿದಂ ಸತ್ವಂ । ಯತ್ ಕಿಂಚ ಜಗತ್ಯಾಂ ಜಗತ್ ॥
ತೇನ ತ್ಯಕ್ಕೇನ ಭುಂಜೀಥಾ | ಮಾ ಗೃಧಃ ಕಸ್ಯಸಿದ್ಧನಮ್ ॥
ಯಂ ಬ್ರಹ್ಮಾವರುಣೇಂದ್ರ ರುದ್ರ ಮರುತಃ । ಸುನ್ವಂತಿ ದ್ವಿವ್ಯಸ್ತವ್ಯ: ॥
ವೈದೈಃ ಸಾಂಗಪದಕ್ರಮೋಷಧ್ಯೆ | ಗಾಯಂತಿ ಯಂ ಸಾಮಗಾ
ಧ್ಯಾನಾವಸ್ಥಿತ ತದ್ಧತೇನ ಮನಸಾ | ಪಶ್ಯಂತಿ ಯಂ ಯೋಗಿನೋ ॥
ಯಸ್ಕಾಂತಂ ನ ವಿದುಃ ಸುರಾ- | ಸುರಗಣಾ ದೇವಾಯ ತಸ್ಕೃನಮಃ ॥


3
ಯಾರು ಸ್ಥಿತಪ್ರಜ್ಞ ಕೃಷ್ಣ | ಯಾವ ತೆರದೊಳಿರುವನು |
ಯಾವ ತೆರದಿ ನಡೆವನವನು | ಯಾವ ತೆರದಿ ನುಡಿವನು |
ಮನದೊಳಿರುವ ಸಕಲ ಕಾಮ- 1 ಗಳನು ತೊರೆಯುವಾತನು
ತನ್ನ ಮನಸಿನೊಳಗೆ ತಾನೆ | ಶಾಂತಿ ಪಡೆಯುವಾತನು |
ದುಃಖಬರಲು ಮರುಗನವನು | ಯಾವ ಸುಖವ ಬಯಸನು
ಮೋಹ ಭೀತಿ ಕೋಪವಿಲ್ಲ- 1 ದವನೆ ಸ್ಥಿತಪ್ರಜ್ಞನು |
ಅಶುಭದಲ್ಲಿ ಕುಗ್ಗನವನು | ಶುಭವ ಬರಲು ಹಿಗ್ಗನು |
ದ್ವೇಷ ಮೋಹಗಳನ್ನು ತೊರೆದು | ಅಚಲವಾಗಿ ನಡೆವನು |
ಇಂದ್ರಿಯಂಗಳೆಲ್ಲವನ್ನು ಅಚಲ ಬುದ್ದಿ ಯೋಗಿಯು
ಆವೆ ದೇಹ ಮುದುಡುವಂತೆ | ವಿಷಯದಿಂದ ಸೆಳೆವನು |
ಬಾಹ್ಯ ವಿಷಯವ ಅಳಿಯಬಲ್ಲದು | ನಿರಾಹಾರದಿಂದಲೇ ॥
ವಿಷಯ ವಾಸನೆ ಕುಗ್ಗಲಾರದು | ಆತ್ಮ ದರುಶನವಿಲ್ಲದೆ |
ಜ್ಞಾನಿ ಮನುಜ ಮನಸಿನಿಂದ | ಯತ್ನ ಮಾಡುತ್ತಿದ್ದರೂ
ಮಂಗ ಇಂದ್ರಿಯಂಗಳು | ಮರುಳಿ ಮಡುವಿಗೆಳೆವವು |
ಇಂದ್ರಿಯಗಳನ್ನು ಗೆದ್ದು | ನನ್ನ ನೆನೆಯುತಿರುವನು |
ಅವುಗಳನ್ನು ಜಯಸಿದವನೆ ಅಚಲ ಬುದ್ಧಿಯೋಗಿಯು

 

4
ವೈಷ್ಣವ ಜನ ತೋ ತೇನೇ ಕಹೀಯೆ ಜೇ ಪೀಡಪರಾಯಿ ಜಾಣೇ ರೇ ।
ಪರದುಃಖೇ ಉಪಕಾರ ಕರೇ ತೋಯೇ | ಮನ ಅಭಿಮಾನ ನ ಆಣೇ ರೇ |
ಸಕಲೋಕಮಾಂ ಸಹುನೇ ವಂದೇ | ನಿಂದಾ ನ ಕರೇ ಕೇನೀ ರೇ |
ವಾಚ ಕಾಚ ಮನ ನಿಶ್ಚಲರಾಖೇ | ಧನಧನ ಜನನೀ ತೇನೀ ರೇ |
ಸಮದೃಷ್ಟಿ ನೇ ತೃಷ್ಣಾತ್ಯಾಗಿ 1 ಪರಿಸ್ತೀ ಜೇನೀ ಮಾತರೆ
ಜಿದ್ದಾಥಕೀ ಅಸತ್ಯನ ಬೋಲೇ । ಪರಧನ ನವ ಝಾಲೆ ಹಾಥ ರೇ ॥
ಮೋಹಮಾಯಾ ವ್ಯಾಪೇ ನಹಿ ಜೇನೆ | ದೃಢವೈರಾಗ್ಯಜೇನಾ ಮನಮಾಂ ರೇ ।
ರಾಮನಾಮ ಶುಂ ತಾಳೀ ಲಾಗಿ 1 ಸಕಳ ತೀರಥ ತೇನಾ ತನಮಾಂ ರೇ |
ವಣ ಲೋಭೀ ನೇ ಕಪಟ ರಹಿತ ಛೇ | ಕಾಮಕ್ರೋಧ ನೀ ವಾರಾರೇ |
ಭಣೇ ನರಸಂಯೋ ತೇನು ದರಸನ ಕರತಾ | ಕುಳ ಏಕೋತೇರ ತಾರ್ಯಾಂರೇ ॥

5
ರಘುಪತಿ ರಾಘವ ರಾಜಾರಾಮ್ | ಪತಿತ ಪಾವನ ಸೀತಾರಾಮ್ ॥
ಜಾನಕೀ ಜೀವನ ರಾಮನಾಮ್ | ಸುಂದರ ಮಾಧವ ಮೇಘಶ್ಯಾಮ್ |
ಈಶ್ವರ ಅಲ್ಲಾ ತೇರೇ ನಾಮ್ | ಸಬಕೋ ಸನ್ಮತಿ ದೇ ಭಗವಾನ್ ||
ಮಂದಿರ ಮಶ್ಚಿದ್ ತೇರೆ ಧಾಮ್ – ಸಬಕೋ ಜನ್ಮದಿಯಾ ಭಗವಾನ್ |
ಏಸುಕ್ರೈಸ್ತ ಪೈಗಂಬರ ನಾಮ್ | ಸಬ ಸಂತೊಂಕೋ ಕರೆ ಪ್ರಣಾಮ್ ॥
ಓಂ ಶಿವ ಓಂ ಶಿವ ಪರಾತ್ಪರಾ ಶಿವ | ಓಂಕಾರಾ ಶಿವ ತವ ಚರಣಮ್ |
ನಮಾಮಿ ಶಂಕರ ಭವಾನಿ ಶಂಕರ | ಉಮಾ ಮಹೇಶ್ವರ ತವ ಚರಣಮ್ |
ಜೈ ಶಿವ ಶಂಕರ ಉಮಾಧವ | ಪತಿತ ಪಾವನ ಸದಾಶಿವ |
ಭಾರತಕೇ ರಖವಾಲೆ ರಾಮ್ | ದೀನ ಜನೋಂಕೇ ಪ್ಯಾರೇ ಶ್ಯಾಮ್ |


6
ಶ್ರೀ ಗುರುವೇ ಶ್ರೀ ಗುರುವೇ ಶ್ರೀ ಗುರುವೇ ।
ಶ್ರೀ ಗುರುವೇ ಅರುವೆ ಶರಣಾಗಿ ಬರುವೆ |
ಕರುಣೆಯನು ಕೋರಿ ಬರುವೆ |
ಹೃತ್ಪಕೃತಿ ತಂದ ಕಿಡಿ ಹೂಗಳನ್ನು
ಶ್ರೀ ಚರಣಕೆರೆಯುತಿರುವೆ

ಆ ಪಾದ ಪದ್ಮ ಎದೆಗವಚಿ ಹಿಡಿದು ನಡುನೆತ್ತಿಗೆತ್ತಿಕೊಂಬೆ
ಉಸಿರಿಂದಲದನೆ ಬಲಗೊಂಬೆ ನನ್ನ ಕಣ್ಣೂಂಬೆಗೊತ್ತಿಕೊಂಬೆ
ಕಣ್ಣಿಂದ ನಿನ್ನ ನನ್ನಣ್ಣ ಸೇರಿ ಎದೆಯೊಳಣ ಬೆಳಕನೆತ್ತಿ |
ತಿರುಮೂರ್ತಿ ಮಾಡು ನನ್ನನ್ನು ನಿನ್ನ ಚಿನ್ನೋದ ಬೋಧ ಬಿತ್ತಿ |
ಭವ ಭವಕೆ ನನ್ನ ಮುಂದೆತ್ತಿ ಒತ್ತಿ ತಂದಂಥ ತಂದೆ ನೀನು
ಭಾವಕ್ಕೆ ಇಳಿದು ಸದ್ಭಾವ ಒಲಿಸಿ ಬರುವಂತೆ ಮಾಡು ನೀನು
ಆಂತರ್ಯದೊಂದು ಚೈತನ್ಯ ನಿನ್ನ ಕೈಂಕರ್ಯ ಕರ್ತೃವಾಗಿ |
ಕ್ಷೇತ್ರಜ್ಞ ಬರಲಿ ಚೈತೇಶನಾಗಿ ಮಧು ಬೋಧ ಮೋದ ಮಾಗಿ
ಹೇ ಭವನೆ ಶಿವನೆ ಜವನವರ ಜನಕೆ ಶವವಾಗದಂತೆ ಮಾಡು |
ಆ ಅಮೃತ ದೃಷ್ಟಿಯಲಿ ದಿವ್ಯ ಸೃಷ್ಟಿಯಲ್ಲಿ ನೆರೆದು ತೆರೆದು ನೋಡು 131

– ದ.ರಾ. ಬೇಂದ್ರೆ

 

7
ಪ್ರಾಥಃ ಪ್ರಾರ್ಥನಾ

ಈಶಾವಾಸ್ಯಮಿದಂ ಸತ್ವಂ | ಯತ್ ಕಿಂಚ ಜಗತ್ಯಾಂಜಗತ್ |
ತೇನ ತ್ಯಕ್ತನ ಭುಂಜೀಥಾ ಮಾ ಗೃಧಃ ಕಸ್ಯ ಸಿದ್ಧನಮ್ ॥
ಪ್ರಾಥಃ ಸ್ಮರಾಮಿ ಹೃದಿ ಸಂಸ್ಪುಕದಾತ್ಮತತ್ವಮ್ |
ಸಚ್ಚಿತ್ತುಖಂ ಪರಮಹಂಸಗತಿಂ ತುರೀಯಂ ॥
ಯತ್ ಸ್ವಪ್ನ-ಜಾಗರ ಸುಷುಪ್ತ ಮವೈತಿ ನಿತ್ಯಮ್ |
ತದ್ ಬ್ರಹ್ಮ ನಿಷ್ಕಲಮಹಂ ನಚ ಭೂತಸಂಘಃ |
ಪ್ರಾತರಜಾಮಿ ಮನಸೋ ವಚ ಸಾಮ ಗಮ್ಯಂ ।
ವಾಚೊ ವಿಭಾಂತಿ ನಿಖಿಲಾ ಯದನು ಗ್ರಹಣ |
ಯನ್ನೇತಿ ನೇತಿ ವಚನೈರ್ನಿಗಮಾ ಅವೋಚುಃ |
ತಂ ದೇವ ದೇವ ಮಜಮಚ್ಯುತ ಮಾಹುರ ಗ್ರಮ್ |

ನಾಡ ಗೀತೆ

ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಭೂದೇವಿಯ ಮಕುಟದ ನವಮಣಿಯೆ,
ಗಂಧದ ಚಂದದ ಹೊನ್ನಿನ ಗಣಿಯೆ;
ರಾಘವ ಮಧುಸೂಧನರವತರಿಸಿದ
ಭಾರತ ಜನನಿಯ ತನುಜಾತೆ !
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಜನನಿಯ ಜೋಗುಳ ವೇದದ ಘೋಷ,
ಜನನಿಗೆ ಜೀವವು ನಿನ್ನಾವೇಶ,
ಹಸುರಿನ ಗಿರಿಗಳ ಸಾಲೇ,
ನಿನ್ನಯ ಕೊರಳಿನ ಮಾಲೆ,
ಕಪಿಲ ಪತಂಜಲ ಗೌತಮ ಜಿನನುತ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಶಂಕರ ರಾಮಾನುಜ ವಿದ್ಯಾರಣ್ಯ,
ಬಸವೇಶ್ವರ ಮಧ್ವರ ದಿವ್ಯಾರಣ್ಯ
ರನ್ನ ಷಡಕ್ಷರಿ ಪೊನ್ನ,
ಪಂಪ ಲಕುಮಿಪತಿ ಜನ್ನ
ಕುಮಾರವ್ಯಾಸರ ಮಂಗಳ ಧಾಮ,
ಕವಿ ಕೋಗಿಲೆಗಳ ಪುಣ್ಯಾರಾಮ
ನಾನಕ ರಾಮಾ ನಂದ ಕಬೀರರ
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ತೈಲಪ ಹೊಯ್ಸಳರಾಳಿದ ನಾಡೇ,
ಡಂಕಣ ಜಕಣರ ನೆಚ್ಚಿನ ಬೀಡೆ
ಕೃಷ್ಣ ಶರಾವತಿ ತುಂಗಾ,
ಕಾವೇರಿಯ ವರ ರಂಗಾ
ಚೈತನ್ಯ ಪರಮಹಂಸ ವಿವೇಕರ,
ಭಾರತ ಜನನಿಯ ತನುಜಾತೆ !
ಜಯ ಹೇ ಕರ್ನಾಟಕ ಮಾತೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
ಸರ್ವ ಜನಾಂಗದ ಶಾಂತಿಯ ತೋಟ,
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ ಕ್ರೈಸ್ತ ಮುಸಲ್ಮಾನ,
ಪಾರಸಿಕ ಜೈನರುದ್ಯಾನ
ಜನಕನ ಹೋಲುವ ದೊರೆಗಳ ಧಾಮ,
ಗಾಯಕ ವೈಣಿಕರಾರಾಮ
ಕನ್ನಡ ನುಡಿ ಕುಣಿದಾಡುವ ಗೇಹ,
ಕನ್ನಡ ತಾಯಿಯ ಮಕ್ಕಳ ದೇಹ
ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ
ಜಯ ಸುಂದರ ನದಿ ವನಗಳ ನಾಡೇ,
ಜಯ ಹೇ ರಸಋಷಿಗಳ ಬೀಡೆ!
ಜಯ ಭಾರತ ಜನನಿಯ ತನುಜಾತೆ,
ಜಯ ಹೇ ಕರ್ನಾಟಕ ಮಾತೆ!
-ರಾಷ್ಟ್ರಕವಿ ಕುವೆಂಪು

 

ರಾಷ್ಟ್ರ ಗೀತೆ

 

ಜನ ಗಣ ಮನ ಅಧಿನಾಯಕ ಜಯಹೇ!
ಭಾರತ ಭಾಗ್ಯ ವಿಧಾತಾ!
ಪಂಜಾಬ, ಸಿಂಧು, ಗುಜರಾತ, ಮರಾಠಾ,
ದ್ರಾವಿಡ, ಉತ್ಕಳ, ವಂಗ!
ವಿಂಧ್ಯ, ಹಿಮಾಚಲ, ಯಮುನಾ, ಗಂಗ,
ಉಚ್ಚಲ ಜಲಧಿತರಂಗ!
ತವ ಶುಭನಾಮೇ ಜಾಗೇ!
ತವ ಶುಭ ಆಶಿಷ ಮಾಗೇ!
ಗಾಹೇ ತವ ಜಯ ಗಾಥಾ!
ಜನಗಣ ಮಂಗಳದಾಯಕ ಜಯಹೇ ಭಾರತ ಭಾಗ್ಯವಿಧಾತಾ!
ಜಯಹೇ! ಜಯಹೇ! ಜಯಹೇ! ಜಯ ಜಯ ಜಯ ಜಯಹೇ!
-ರಬೀಂದ್ರನಾಥ್ ಠಾಗೋರ್

 

ವಂದೇಮಾತರಂ

ವಂದೇಮಾತರಂ
ಸುಜಲಾಂ ಸುಫಲಾಂ ಮಲಯಜ ಶೀತಲಾಂ
ಸಸ್ಯ ಶ್ಯಾಮಲಾಂ ಮಾತರಮ್ ||ವಂದೇ||
ಶುಭ್ರಜ್ಯೋತ್ಸ್ನಾ ಪುಲಕಿತಯಾಮಿನೀಂ
ಪುಲ್ಲಕುಸುಮಿತ ದ್ರುಮದಲ ಶೋಭಿನೀಂ
ಸುಹಾಸಿನೀಂ ಸುಮಧುರ ಭಾಷಿಣೀಂ
ಸುಖದಾಂ ವರದಾಂ ಮಾತರಮ್ || ವಂದೇ ||
-ಬಂಕಿಂಚಂದ್ರ ಛಠೋಪಾಧ್ಯಾಯ್

 

Pledge

India is my country.
All Indians are my brothers and sisters.
I love my country and I am proud of her rich and varied heritage.
I shall always strive to be worthy of her.
I shall give my parents, teachers, elders respect and treat everyone with courtesy.
To my country and to my people I pledge my devotion.
In this well being and prosperity alone lies my happiness